NTSE -2019 RESULTS Udupi District bags 4 and all 4 students of MICE

Druhan Rajiv Shah, Hayan Arshad, Prathwik Kushal Kumar and Greeshma V.S, have been selected by NCERT as NATIONAL TALENT SCHOLARS for the year 2019 and will receive scholarship of Rs. 1250/- per month till Ph.D. MICE is proud to announce that all 4 selected students of the district are student who have undergone 2 years of training at MICE-Udupi.

MICE started training students to appear for NTSE exams in the year 2004 and since then 66 students have been selected in the National level and 189 students in the state level. The selected students get scholarship of 1250 /- per month till their Ph.D.

On analyzing the previous results we find that, the students who have trained for NTSE stand a very good chance of being selected in the KVPY examination which is held when student are the Pre-University course. Till date, 16 students who were trained at MICE (IIT-JEE/ NEET training) are the recipients of this prestigious scholarship and they were eligible to get direct admission in the Indian Institute of Science- Bengaluru. The IISc. also encourages these KVPY scholars by giving
them Rs. 84000/- per year. This scholarship also continues till their Ph.D.

National Council of Educational Research and Training (NCERT) awards 2000 Scholarships to the talented students of Class 10 each year through its National Talent Search Scheme and then nurture the talent by way of providing financial assistance in the form of monthly scholarship. (www.ncert.nic.in ). MICE conducts this training daily and during weekends. Interested students can join during the month of November. Contact – 0820 2522906.

ರಾಷ್ಟ್ರೀಯ  ಪ್ರತಿಭಾನ್ವೇಷಣೆ -2019 ಪರೀಕ್ಷೆ ಫಲಿತಾಂಶ
ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ನಾಲ್ಕೂ ವಿದ್ಯಾರ್ಥಿಗಳು ಮೈಸ್‌ನ ಹೆಮ್ಮೆ.  

16-06-2019 ರಂದು ಜರುಗಿದ  ರಾಷ್ಟ್ರಮಟ್ಟದ  ಪ್ರತಿಭಾನ್ವೆಷಣೆ ಪರೀಕ್ಷೆಯಲ್ಲಿ ಆಯ್ಕೆಯಾದ ೨೦೦೦  ವಿದ್ಯಾರ್ಥಿಗಳ ಪೈಕಿ ಉಡುಪಿ ಜಿಲ್ಲೆಯಿಂದ 4 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ - ದ್ರುಹಾನ್ ರಾಜೀವ್ ಶಾ, ಹಯಾನ್ ಅರ್ಶದ್, ಪ್ರಥ್ವಿಕ್ ಕುಶಾಲ್ ಕುಮಾರ್ ಹಾಗೂ ಗ್ರೀಷ್ಮ  ವಿ.ಎಸ್. ಈ ಎಲ್ಲಾ ವಿದ್ಯಾರ್ಥಿಗಳು ಮೈಸ್ ಸಂಸ್ಥೆಯಲ್ಲಿ 2 ವರುಷದ ತರಬೇತಿ ಪಡೆದಿದ್ದಾರೆ ಎಂಬುವುದು ಹೆಮ್ಮೆಯ ವಿಷಯವಾಗಿದೆ. 

ರಾಷ್ಟ್ರೀಯ ಪ್ರತಿಭಾನ್ವೆಷಣೆ ಪರೀಕ್ಷೆಯಲ್ಲಿ ಭಾರತ ಸರಕಾರದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ (NCERT ) ಯಿಂದ “ರಾಷ್ಟ್ರೀಯ ಪ್ರತಿಭಾ ವಿದ್ಯಾರ್ಥಿ” (National Talent Scholar) ಎಂದು ಆಯ್ಕೆಯಾಗಿದ್ದಾರೆ. ಪ್ರಸ್ತುತ ಉಡುಪಿ ಮೈಸ್ ಸಂಸ್ಥೆಯಲ್ಲಿ ತರಬೇತಿ ಹೊಂದಿದ ೬೬ ವಿದ್ಯಾರ್ಥಿಗಳು “ರಾಷ್ಟ್ರೀಯ ಪ್ರತಿಭಾ ವಿದ್ಯಾರ್ಥಿ” ಪುರಸ್ಕಾರ ಪಡೆದವರಾಗಿದ್ದಾರೆ ಇವರಿಗೆ ಪ್ರತೀ ತಿಂಗಳು ರೂ. 1250/- ರಂತೆ ಎನ್.ಸಿ.ಇ.ಅರ್.ಟಿ ವಿದ್ಯಾರ್ಥಿವೇತನ ಕೊಡುತ್ತಿದೆ. ಈ ವಿದ್ಯಾರ್ಥಿವೇತನವು ಇವರು ಪಿ.ಹೆಚ್.ಡಿ ಮಾಡುವ ತನಕ ಮುಂದುವರಿಯುವುದು.ಹಾಗೆಯೇ ರಾಜ್ಯ ಮಟ್ಟದಲ್ಲಿ ಆಯ್ಕೆಗೊಂಡ ಮೈಸ್‌ನಲ್ಲಿ ತರಬೇತಿ ಪಡೆದ ಇತರ ೧೮೯ ವಿದ್ಯಾರ್ಥಿಗಳಿಗೂ ರೂ. 4000/-(ವಾರ್ಷಿಕ ರೂ. 2000/- ದಂತೆ  2 ವರ್ಷ) ಕರ್ನಾಟಕ ರಾಜ್ಯ ಸರಕಾರವು ವಿದ್ಯಾರ್ಥಿವೇತನ ನೀಡುತ್ತದೆ.

ಈವರೆಗಿನ ಮಕ್ಕಳ ಸಾಧನೆ ಪರಿಶೀಲಿಸಿದರೆ ಈ ತರಬೇತಿ ಪಡೆದ ಮಕ್ಕಳು ಮುಂದೆ ಬರುವ ಕೆ.ವಿ.ಪಿ.ವೈ(KVPY) ಪರೀಕ್ಷೆಯನ್ನು ಎದುರಿಸಲು ಸಮರ್ಥರು ಎಂದು ಕಂಡುಬಂದಿದೆ. ಮೈಸ್‌ನಲ್ಲಿ ಕಳೆದ 15 ವರುಷಗಳಲ್ಲಿ NTSE ತರಬೇತಿ ಪಡೆದ ಮಕ್ಕಳಲ್ಲಿ ೧೬ ಮಕ್ಕಳು ಇಂದಿಗೆ ‘ಕಿಶೋರ ವಿಜ್ಞಾನಿ’ಗಳೆಂದು ಪರಿಗಣಿಸಲ್ಪಟ್ಟಿದ್ದಾರೆ. ಇವರಿಗೆ ರೂ. 84000/- ವಾರ್ಷಿಕ ವಿದ್ಯಾರ್ಥಿವೇತನ ಪಿ.ಹೆಚ್.ಡಿ ಮಾಡುವ ತನಕ ದೊರಕುವುದು ಹಾಗೂ ಈ ವಿದ್ಯಾರ್ಥಿಗಳಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್  ಸೈನ್ಸ್ - ಬೆಂಗಳೂರು (IISc Bengaluru ) ನಲ್ಲಿ ಮೂಲಭೂತ ವಿಜ್ಞಾನ ಹಾಗೂ ಸಂಶೋಧನಾ ವೃತ್ತಿ ವ್ಯಾಸಂಗ ಮಾಡುವ ಅವಕಾಶ ದೊರಕುತ್ತದೆ. ಮಾಹಿತಿ: (http ://kvpy.iisc.ernet.in )

ಭಾರತ ಸರಕಾರದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಂಸ್ಠೆ (NCERT ) ೧೦ನೇತರಗತಿಯಲ್ಲಿ ಕಲಿಯುತ್ತಿರುವ ಸುಮಾರು 2000 ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾನ್ವೇಷಣಾ ಯೋಜನೆಯ ಮೂಲಕ ವಿದ್ಯಾರ್ಥಿ ವೇತನ ನೀಡುತ್ತಿದೆ. ಸರಕಾರವು ಪ್ರತಿ ತಿಂಗಳು ಇಂತಹ ವಿದ್ಯಾರ್ಥಿಗಳಿಗೆ ಅವರು ಪಿ.ಹೆಚ್.ಡಿ ವಿದ್ಯಾಭ್ಯಾಸ ಮಾಡುವ ತನಕ ವಿದ್ಯಾರ್ಥಿ ವೇತನ ನೀಡಿ ತನ್ಮೂಲಕ ಪ್ರತಿಭಾ ಪೋಷಣೆ ಮಾಡುತ್ತಿದೆ. ಮಾಹಿತಿ:- (www.ncerti.nic.in ).

ಪ್ರಾಂಶುಪಾಲರಾದ ಸುಪ್ರಿತಾ ಎಸ್. ಅಮೀನ್ ಮಕ್ಕಳಲ್ಲಿ ಮುಂಬರಲಿರುವ ಪರೀಕ್ಷೆಗಳನ್ನು ಎದುರಿಸಲು ಸ್ಪೂರ್ತಿ ಹಾಗೂ ಧೈರ್ಯ ತುಂಬಿ ಅವರಿಗೆ ಮತ್ತು ಅವರ ಪೋಷಕರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ. ನವಂಬರ್ ತಿಂಗಳಲ್ಲಿ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ತರಬೇತಿಯುನ್ನು ಪ್ರಾರಂಬಿಸಲಾಗುವುದು. ಮಾಹಿತಿಗಾಗಿ ಕಲ್ಪನಾ ಟಾಕೀಸ್ ಪಕ್ಕದಲ್ಲಿರುವ ಮೈಸನ್ನು ಸಂಪರ್ಕಿಸಬಹುದು. ಉಡುಪಿ: 0820 2522906




Comments