ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ



ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನದಲ್ಲಿ ಡಾಕ್ಟರೇಟ್ ಹಂತದವರೆಗೆ ಮತ್ತು  ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳಲ್ಲಿ ದ್ವಿತೀಯ ಹಂತದವರೆಗೆ  ವಿದ್ಯಾರ್ಥಿವೇತನವನ್ನು ನೀಡಲು ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯನ್ನು  X ನೇ ತರಗತಿಯ ವಿದ್ಯಾರ್ಥಿಗಳಿಗಾಗಿ  ನಡೆಸಲಾಗುತ್ತದೆ. ದೇಶಾದ್ಯಂತ 2000 ವಿದ್ಯಾರ್ಥಿಗಳಿಗೆ  ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.  ಇದರಲ್ಲಿ ಎಸ್‌ಸಿಗೆ 15 ಪ್ರತಿಶತ, ಎಸ್‌ಟಿಗೆ 7.5 ಮತ್ತು ಇತರ ಹಿಂದುಳಿದ ವರ್ಗಗಳಿಗೆ 27 ಪ್ರತಿಶತ ಮತ್ತು  ದಿವ್ಯಾಂಗ  ವಿದ್ಯಾರ್ಥಿಗಳ ಗುಂಪಿಗೆ 4 ಪ್ರತಿಶತದಷ್ಟು ಮೀಸಲಾತಿಯನ್ನು  ಸಹ ನೀಡಲಾಗುತ್ತದೆ.

ಪ್ರತಿಭೆಯನ್ನು ಗುರುತಿಸಲು ಎರಡು ಹಂತದ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತಾರೆ. ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಹಂತದ ಆಯ್ಕೆಯನ್ನು ನಡೆಸಲಾಗುತ್ತದೆ. ಎರಡನೇ ಹಂತದ ಆಯ್ಕೆಯನ್ನು ರಾಷ್ಟ್ರಮಟ್ಟದಲ್ಲಿ NCERT  ನಡೆಸುತ್ತದೆ. 

ಹತ್ತನೇ ತರಗತಿಯಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ರಾಜ್ಯ ಮಟ್ಟದ ಪರೀಕ್ಷೆಯು ಭಾಗ- I  ಮಾನಸಿಕ ಸಾಮರ್ಥ್ಯ ಪರೀಕ್ಷೆ (Mental Ability Test) ಭಾಗ - II  ತಾರ್ಕಿಕ ಯೋಗ್ಯತಾ ಪರೀಕ್ಷೆಯನ್ನು ಹೊಂದಿದೆ. (Scholastic Ability Test).

8 ನೇ ತರಗತಿಯವರಿಗೆ  NTSE ಪರೀಕ್ಷೆಗೆ ಮಣಿಪಾಲ ಇನ್ಸ್ಟಿಟ್ಯೂಟ್ ಒಫ್  ಕಂಪ್ಯೂಟರ್ ಎಜುಕೇಶನ್  (MICE) ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಿದೆ. MICEನಿಂದ ಈ ತರಬೇತಿಯನ್ನು ಐಐಟಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜುಗಳ (ಸುರತ್ಕಲ್ ) ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ಹಾಜರಾಗುವ ವಿದ್ಯಾರ್ಥಿಗಳಿಗೆ ಮತ್ತು MAHE ಮಣಿಪಾಲ್ ಪ್ರವೇಶ ಪರೀಕ್ಷೆಗೆ ಅಡಿಪಾಯ ತರಬೇತಿ ಎಂದು ಪರಿಗಣಿಸಲಾಗಿದೆ.

Comments